ಜ್ಯೋತಿಷ್ಯ

12 ರಾಶಿಗಳ ನಿತ್ಯ ರಾಶಿಫಲ 22-08-2026

ಸುದ್ದಿ ಡೆಸ್ಕ್· 5 min read
12 ರಾಶಿಗಳ ನಿತ್ಯ ರಾಶಿಫಲ  22-08-2026

12 ರಾಶಿಗಳ ನಿತ್ಯ ರಾಶಿಫಲ 22-08-2026

ಮೇಷ: ಕೆಲಸಗಳಲ್ಲಿ ಚುರುಕು ಹೆಚ್ಚಾಗುತ್ತದೆ. ಆತುರದ ನಿರ್ಧಾರಗಳನ್ನು ತಪ್ಪಿಸಿ. ಹಣಕಾಸಿನಲ್ಲಿ ಅನಗತ್ಯ ಖರ್ಚು ಬೇಡ.

ವೃಷಭ: ಕುಟುಂಬದವರ ಸಹಕಾರ ಸಿಗಲಿದೆ. ಬಾಕಿ ಉಳಿದ ಕೆಲಸಗಳನ್ನು ಮುಗಿಸಲು ಉತ್ತಮ ದಿನ. ಆರೋಗ್ಯದ ಕಡೆ ಗಮನವಿರಲಿ.

ಮಿಥುನ: ಹೊಸ ವಿಚಾರಗಳನ್ನು ಕಲಿಯಲು ಅನುಕೂಲ. ಮಾತುಕತೆಯಲ್ಲಿ ಸಂಯಮ ಅಗತ್ಯ. ಪ್ರಯಾಣದಲ್ಲಿ ಸ್ವಲ್ಪ ವಿಳಂಬವಾಗಬಹುದು.

ಕರ್ಕಾಟಕ: ಮನಸ್ಸಿಗೆ ನೆಮ್ಮದಿ ದೊರೆಯುವ ದಿನ. ಕುಟುಂಬದಲ್ಲಿ ಶುಭ ವಿಚಾರಗಳು ನಡೆಯಬಹುದು. ಹಣದ ವ್ಯವಹಾರದಲ್ಲಿ ಎಚ್ಚರಿಕೆ.

ಸಿಂಹ: ನಿಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಬಹುದು. ಹಿರಿಯರ ಸಲಹೆ ಉಪಯೋಗವಾಗುತ್ತದೆ. ಅತಿಯಾದ ಆತ್ಮವಿಶ್ವಾಸ ಬೇಡ.

ಕನ್ಯಾ: ಕೆಲಸಗಳನ್ನು ಕ್ರಮಬದ್ಧವಾಗಿ ಮಾಡಿದರೆ ಉತ್ತಮ ಫಲ. ಹಳೆಯ ಸಮಸ್ಯೆಯೊಂದಕ್ಕೆ ಪರಿಹಾರ ಸಿಗಬಹುದು. ಖರ್ಚು ನಿಯಂತ್ರಿಸಿ.

ತುಲಾ: ಸಂಬಂಧಗಳಲ್ಲಿ ಸಣ್ಣ ಭಿನ್ನಾಭಿಪ್ರಾಯ ಉಂಟಾಗಬಹುದು; ಮಾತಿನಿಂದ ವಿಷಯ ದೊಡ್ಡದಾಗದಂತೆ ನೋಡಿಕೊಳ್ಳಿ. ಹೊಸ ಅವಕಾಶವೊಂದು ಬರಬಹುದು.

ವೃಶ್ಚಿಕ: ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರಮುಖ ಕೆಲಸದಲ್ಲಿ ಪ್ರಗತಿ ಸಾಧ್ಯ. ರಹಸ್ಯ ವಿಷಯಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ.

ಧನು: ದೂರದ ಸಂಪರ್ಕ ಅಥವಾ ಪ್ರಯಾಣದ ವಿಚಾರದಲ್ಲಿ ಶುಭ ಸುದ್ದಿ ಸಿಗಬಹುದು. ಅಧ್ಯಯನ ಮತ್ತು ಜ್ಞಾನಕಾರ್ಯಗಳಿಗೆ ಉತ್ತಮ ದಿನ.

ಮಕರ: ಜವಾಬ್ದಾರಿಗಳು ಹೆಚ್ಚಾಗಬಹುದು. ತಾಳ್ಮೆಯಿಂದ ಕೆಲಸ ಮಾಡಿದರೆ ಉತ್ತಮ ಫಲ. ಹಣದ ವಿಷಯದಲ್ಲಿ ಯೋಜನೆ ಅಗತ್ಯ.

ಕುಂಭ: ಹೊಸ ಯೋಜನೆ ಆರಂಭಿಸುವ ಯೋಚನೆ ಬರಬಹುದು. ಸ್ನೇಹಿತರ ಸಹಾಯ ದೊರೆಯುತ್ತದೆ. ಸಮಯ ನಿರ್ವಹಣೆಗೆ ಆದ್ಯತೆ ನೀಡಿ.

ಮೀನ: ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ. ನಿರ್ಧಾರಗಳಲ್ಲಿ ಭಾವನೆಗಿಂತ ವಿವೇಕಕ್ಕೆ ಆದ್ಯತೆ ನೀಡಿ.

ಶುಭಾಶಯ: “ಸರ್ವೇ ಜನಾಃ ಸುಖಿನೋ ಭವಂತು”

ಆರ್. ಶ್ರೀನಾಥ್

ಜ್ಯೋತಿಷ್ಯರು, ವಾಸ್ತು ಶಾಸ್ತ್ರಜ್ಞರು

ಪುರೋಹಿತರು, ಹೊಸೂರು

+91 95977 48182



Comments

Leave a comment

Recommended Reading