ಕ್ರೈಂ ಸುದ್ದಿ

ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ: ಹಣದ ವಿಚಾರಕ್ಕೆ ಪತ್ನಿಯ ಕುತ್ತಿಗೆ ಮೇಲೆ ತುಳಿದು ಜೀವ ತೆಗೆದ ಪಾಪಿ ಪತಿ

ಸುದ್ದಿ ಡೆಸ್ಕ್· 5 min read
ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ: ಹಣದ ವಿಚಾರಕ್ಕೆ ಪತ್ನಿಯ ಕುತ್ತಿಗೆ ಮೇಲೆ ತುಳಿದು ಜೀವ ತೆಗೆದ ಪಾಪಿ ಪತಿ

ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ: ಹಣದ ವಿಚಾರಕ್ಕೆ ಪತ್ನಿಯ ಕುತ್ತಿಗೆ ಮೇಲೆ ತುಳಿದು ಜೀವ ತೆಗೆದ ಪಾಪಿ ಪತಿ

ಬೆಂಗಳೂರಲ್ಲಿ ಹಣಕಾಸಿನ ವಿಚಾರಕ್ಕೆ ನಡೆದ ಜಗಳವೊಂದು ಭೀಕರ ಕೊ*ಲೆಯಲ್ಲಿ ಅಂತ್ಯವಾಗಿದೆ. ತನ್ನ ಅಣ್ಣನಿಗೆ ಹಣ ನೀಡುವಂತೆ ಹಠ ಹಿಡಿದ ಪತ್ನಿಯ ಮೇಲೆ ಆಕ್ರೋಶಗೊಂಡ ಪತಿ, ಆಕೆಯ ಕುತ್ತಿಗೆಯನ್ನು ಕಾಲಿನಿಂದ ತುಳಿದು ಬರ್ಬರವಾಗಿ ಕೊ*ಲೆ ಮಾಡಿರುವ ಘಟನೆ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ನಡೆದಿದೆ.

ಸಿಲಿಕಾನ್ ಸಿಟಿಯಲ್ಲಿ ಹಣಕಾಸಿನ ವಿಚಾರಕ್ಕೆ ನಡೆದ ಜಗಳವೊಂದು ಭೀಕರ ಕೊ*ಲೆಯಲ್ಲಿ ಅಂತ್ಯವಾಗಿದೆ. ತನ್ನ ಅಣ್ಣನಿಗೆ ಹಣ ನೀಡುವಂತೆ ಹಠ ಹಿಡಿದ ಪತ್ನಿಯ ಮೇಲೆ ಆಕ್ರೋಶಗೊಂಡ ಪತಿ, ಆಕೆಯ ಕುತ್ತಿಗೆಯನ್ನು ಕಾಲಿನಿಂದ ತುಳಿದು ಬರ್ಬರವಾಗಿ ಕೊ*ಲೆ ಮಾಡಿರುವ ಘಟನೆ ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ನಡೆದಿದೆ.

ಮೃತ ದುರ್ದೈವಿ ಯಾರು?

c1.jfif

ಮೂಲತಃ ಬೆಳಗಾವಿ ಮೂಲದ ಕಾವ್ಯ (34) ಕೊ*ಲೆಯಾದ ದುರ್ದೈವಿ. ಈಕೆಯ ಪತಿ ಕರಿಯಪ್ಪ ಎಂಬಾತನೇ ಕೊ*ಲೆ ಮಾಡಿದ ಆರೋಪಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕರಿಯಪ್ಪ ನಗರದಲ್ಲಿ ಸಣ್ಣಪುಟ್ಟ ಕಂಟ್ರಾಕ್ಟರ್ ಕೆಲಸ ಮಾಡುತ್ತಿದ್ದನು.

ಕೊ*ಲೆಗೆ ಕಾರಣವೇನು?

ಪತಿ ಕರಿಯಪ್ಪ ಮತ್ತು ಪತ್ನಿ ಕಾವ್ಯ ನಡುವೆ ಕಳೆದ ಒಂದು ವಾರದಿಂದ ಹಣಕಾಸು ಹಾಗೂ ಆಸ್ತಿ ವಿಚಾರವಾಗಿ ಸದಾ ಗಲಾಟೆ ನಡೆಯುತ್ತಿತ್ತು. ಗುರುವಾರ ಕರಿಯಪ್ಪ ತನ್ನ ಕೆಲಸದ ನಿಮಿತ್ತ 2 ಲಕ್ಷ ರೂಪಾಯಿ ಹಣವನ್ನು ಮನೆಗೆ ತಂದು ಇಟ್ಟಿದ್ದನು. ಈ ಹಣದ ಮೇಲೆ ಕಣ್ಣಿಟ್ಟಿದ್ದ ಪತ್ನಿ ಕಾವ್ಯ, ಆ ಹಣವನ್ನು ತನ್ನ ಅಣ್ಣನಿಗೆ ಕೊಡಬೇಕು ಎಂದು ಪತಿಯೊಂದಿಗೆ ಗಲಾಟೆ ಮಾಡಿದ್ದಾಳೆ.

ಇದೇ ಹಣದ ವಿಚಾರವಾಗಿ ಇಂದು ಮಧ್ಯಾಹ್ನ 12:30ರ ಸುಮಾರಿಗೆ ದಂಪತಿ ನಡುವೆ ಮತ್ತೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಆಕ್ರೋಶಗೊಂಡ ಕರಿಯಪ್ಪ, ಪತ್ನಿ ಕಾವ್ಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಕೆಳಗೆ ಬಿದ್ದಿದ್ದ ಕಾವ್ಯ ಅವರ ಕುತ್ತಿಗೆಯ ಮೇಲೆ ತನ್ನ ಕಾಲಿನಿಂದ ಬಲವಾಗಿ ತುಳಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಕಾವ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದ ತಕ್ಷಣ ಪೀಣ್ಯಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೃತ್ಯ ಎಸಗಿದ ಬಳಿಕ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಪತಿ ಕರಿಯಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಣದ ವ್ಯಾಮೋಹ ಮತ್ತು ಕ್ಷಣಿಕ ಕೋಪ ಇಬ್ಬರು ಮಕ್ಕಳನ್ನು ಅನಾಥರನ್ನಾಗಿಸಿದೆ. ಈ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a comment

Recommended Reading