ರಾಜಕೀಯ

ಕರ್ನಾಟಕ ರಾಜಕಾರಣದ ‘ಟಗರು’ ಎಂದೇ ಹೆಸರಾದ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ನಿಜಕ್ಕೂ ಒಂದು ರೋಚಕ ಸಿನಿಮಾ ಇದ್ದಂತೆ.

ಸುದ್ದಿ ಡೆಸ್ಕ್· 5 min read
ಕರ್ನಾಟಕ ರಾಜಕಾರಣದ ‘ಟಗರು’ ಎಂದೇ ಹೆಸರಾದ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ನಿಜಕ್ಕೂ ಒಂದು ರೋಚಕ ಸಿನಿಮಾ ಇದ್ದಂತೆ.

ಕರ್ನಾಟಕ ರಾಜಕಾರಣದ ‘ಟಗರು’ ಎಂದೇ ಹೆಸರಾದ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ನಿಜಕ್ಕೂ ಒಂದು ರೋಚಕ ಸಿನಿಮಾ ಇದ್ದಂತೆ. ಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದು, ರಾಜ್ಯದ ಮುಖ್ಯಮಂತ್ರಿ ಗಾದಿಯವರೆಗೆ ಏರಿದ ಅವರ ಹಾದಿ ಸುಲಭದ್ದಾಗಿರಲಿಲ್ಲ

ಅವರ ಇಡೀ ರಾಜಕೀಯ ಜರ್ನಿ ನೋಡೋದಾದ್ರೆ

ವಕೀಲಿಕೆಯಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಸಿದ್ದರಾಮಯ್ಯ ಮೈಸೂರಿನ ಸಿದ್ದರಾಮನಹುಂಡಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ #ಸಿದ್ದರಾಮಯ್ಯ ಅವರು ಓದಿದ್ದು ಕಾನೂನು (LLB). ಮೊದಲು ಮೈಸೂರಿನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ಆದರೆ, ಅವರ ಮನಸ್ಸು ಇದ್ದದ್ದು ಸಮಾಜ ಸೇವೆಯ ಕಡೆಗೆ. ಹೀಗಾಗಿ, ಪ್ರೊ. ನಂಜುಂಡಸ್ವಾಮಿ ಅವರ ರೈತ ಚಳವಳಿಯಿಂದ ಪ್ರಭಾವಿತರಾಗಿ ಸಾರ್ವಜನಿಕ ಜೀವನಕ್ಕೆ ಬಂದರು. 1978 ರಲ್ಲಿ ಮೊದಲ ಬಾರಿಗೆ ತಾಲೂಕು ಬೋರ್ಡ್ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಕಾಲಿಟ್ಟರು.

s3.webp

ಮೊದಲ ಗೆಲುವು ಮತ್ತು ‘ಕನ್ನಡ ಕಾವಲು ಸಮಿತಿ

1983 ರ ಭರ್ಜರಿ ಎಂಟ್ರಿ,: ಭಾರತೀಯ ಲೋಕದಳ ಪಕ್ಷದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದರು...

ಕನ್ನಡ ಪ್ರೇಮ: ಆಗಿನ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರಿಗೆ "ಕನ್ನಡ ಕಾವಲು ಸಮಿತಿಯ" ಮೊದಲ ಅಧ್ಯಕ್ಷ ಸ್ಥಾನ ಸಿಕ್ಕಿತು. ಕನ್ನಡ ಭಾಷೆ, ಗಡಿ ರಕ್ಷಣೆಗೆ ಅವರು ಅಲ್ಲಿಂದಲೇ ಗಟ್ಟಿ ಧ್ವನಿ ಎತ್ತಲು ಶುರು ಮಾಡಿದರು. ನಂತರ ರೇಷ್ಮೆ ಸಚಿವರೂ ಆದರು.....

ಜೆಡಿಎಸ್‌ನಲ್ಲಿ ಏಳು-ಬೀಳು ಮತ್ತು ‘ಡಿಸಿಎಂ’ ಪಟ್ಟ

s2.avif

ಜನತಾದಳ split ಆದಾಗ ಸಿದ್ದರಾಮಯ್ಯ ಅವರು ಎಚ್.ಡಿ. ದೇವೇಗೌಡರ ಜೊತೆ ನಿಂತರು.

ಹಣಕಾಸು ಮಂತ್ರಿ: ಜೆ.ಎಚ್. ಪಟೇಲ್ ಮತ್ತು ಧರಂ ಸಿಂಗ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿ ಕೆಲಸ ಮಾಡಿದರು. ಅಲ್ಲದೆ, ಹಣಕಾಸು ಸಚಿವರಾಗಿ ಬರೋಬ್ಬರಿ 17 ಬಾರಿ ಬಜೆಟ್ ಮಂಡಿಸಿ, ರಾಜ್ಯದ ಆರ್ಥಿಕತೆಯ ಮೇಲೆ ಬಲವಾದ ಹಿಡಿತ ಸಾಧಿಸಿದರು.

ಟ್ವಿಸ್ಟ್ ಮತ್ತು ಹೊರಹೋಗುವಿಕೆ: ದೇವೇಗೌಡರ ಕುಟುಂಬದ ಜೊತೆಗಿನ ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು) ಸಂಘಟನೆ ಮಾಡಿದ್ದರಿಂದ 2005 ರಲ್ಲಿ ಜೆಡಿಎಸ್‌ನಿಂದ ಹೊರಬರಬೇಕಾಯಿತು.

s6.webp

#ಕಾಂಗ್ರೆಸ್ ಸೇರ್ಪಡೆ ಮತ್ತು ಮಹಾ ಗೆಲುವು (2013)ರಲ್ಲಿ ಜೆಡಿಎಸ್ ಬಿಟ್ಟ ಮೇಲೆ ಅವರು ಕಾಂಗ್ರೆಸ್ ಸೇರಿದರು. ಕಾಂಗ್ರೆಸ್‌ನಲ್ಲಿ ಅವರಿಗೆ ಆರಂಭದಲ್ಲಿ ವಿರೋಧ ವ್ಯಕ್ತವಾದರೂ, ತಮ್ಮ ಗಟ್ಟಿ ನಾಯಕತ್ವದಿಂದ ಎಲ್ಲರನ್ನೂ ಸೆಳೆದರು. 2010 ರಲ್ಲಿ ರೆಡ್ಡಿ ಬ್ರದರ್ಸ್ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಅವರು ನಡೆಸಿದ #ಪಾದಯಾತ್ರೆ ಇಡೀ ಕರ್ನಾಟಕದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು.

s8.avif

ಮೊದಲ ಬಾರಿ ಸಿಎಂ (2013-2018): 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆಯಿತು. ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ದೇವರಾಜ ಅರಸು ಅವರ ನಂತರ 5 ವರ್ಷಗಳ ಅವಧಿಯನ್ನು ಯಶಸ್ವಿಯಾಗಿ ಮುಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ‘ಅನ್ನಭಾಗ್ಯ’, ‘ಕ್ಷೀರಭಾಗ್ಯ’ದಂತಹ ಜನಪ್ರಿಯ ಯೋಜನೆಗಳನ್ನು ತಂದರು.

s7.webp

ವಿರೋಧ ಪಕ್ಷದ ನಾಯಕನಾಗಿ ಅಬ್ಬರ (2019-2023)

2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದರು. ನಂತರ ಬಿಜೆಪಿ ಸರ್ಕಾರ ಬಂದಾಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ತಪ್ಪುಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅವರ ಭಾಷಣಗಳು, ಸದನದಲ್ಲಿ ತಿವಿಯುವ ಶೈಲಿ ಜನರಿಗೆ ಭರ್ಜರಿ ಮನರಂಜನೆ ಜೊತೆಗೆ ಯೋಚಿಸುವಂತೆ ಮಾಡುತ್ತಿದ್ದವು.

ಮತ್ತೆ ಸಿಎಂ ಪೀಠಕ್ಕೆ (2023 ರಿಂದ...)

s1.avif

2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಜನಪ್ರಿಯತೆ ಮತ್ತು ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿಯನ್ನು ನಂಬಿ ಕಣಕ್ಕಿಳಿಯಿತು. ಕಾಂಗ್ರೆಸ್ 135 ಸೀಟುಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿತು. ಸಿಎಂ ಸ್ಥಾನಕ್ಕೆ ಭಾರಿ ಪೈಪೋಟಿ ನಡೆದರೂ, ಅಂತಿಮವಾಗಿ ಸಿದ್ದರಾಮಯ್ಯ ಅವರ ಅನುಭವಕ್ಕೆ ಮನ್ನಣೆ ಸಿಕ್ಕಿ, "ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ" ಅಧಿಕಾರ ವಹಿಸಿಕೊಂಡರು. ಈಗ 'ಐದು ಗ್ಯಾರಂಟಿ' ಯೋಜನೆಗಳ ಮೂಲಕ ಆಡಳಿತ ನಡೆಸುತ್ತಿದ್ದ ಸಿದ್ದರಾಮಯ್ಯ ನಾಳೆ (...........) ನಾಳೆ ಬಿಟ್ಟ ಸ್ಥಳ ತುಂಬೋಣ

s5.avif

ಒಟ್ಟಾರೆ ಸಿದ್ದರಾಮಯ್ಯ ಅಪ್ಪಟ ಹಳ್ಳಿ ಪ್ರತಿಭೆ. ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ನೇರ ನುಡಿ, ಸಾಮಾಜಿಕ ನ್ಯಾಯದ ಹರಿಕಾರನಾಗಿ ಬೆಳೆದ ಧೀಮಂತ ನಾಯಕ. ಯಾರೇ ಎದುರಿದ್ದರೂ ಹೆದರದೆ ವಾದ ಮಾಡುವ ಅವರ ಶೈಲಿಯೇ ಅವರನ್ನು ಇವತ್ತಿಗೂ ಮಾಸ್ ಲೀಡರ್ ಆಗಿ ಉಳಿಸಿದೆ...

Comments

Leave a comment

Recommended Reading