ಆದರ್ಶ ವ್ಯಕ್ತಿಗಳು

ಸಣ್ಣ ಟೈಲರ್ ಅಂಗಡಿಯಲ್ಲಿ ಹುಟ್ಟಿದ Rs. 70000 ಸಾವಿರ ಕೋಟಿಯ ಸಾಮ್ರಾಜ್ಯ " ಪ್ರೆಸ್ಟೀಜ್ ಗ್ರೂಪ್ "

ಸುದ್ದಿ ಡೆಸ್ಕ್· 5 min read
ಸಣ್ಣ ಟೈಲರ್ ಅಂಗಡಿಯಲ್ಲಿ ಹುಟ್ಟಿದ Rs. 70000 ಸಾವಿರ ಕೋಟಿಯ ಸಾಮ್ರಾಜ್ಯ " ಪ್ರೆಸ್ಟೀಜ್ ಗ್ರೂಪ್ "

ಬೆಂಗಳೂರು: ಸಣ್ಣ ಟೈಲರ್ ಅಂಗಡಿಯಿಂದ 70,000 ಕೋಟಿ ಸಾಮ್ರಾಜ್ಯ ಕಟ್ಟಿದ 'ಪ್ರೆಸ್ಟೀಜ್' ಒಡೆಯ

ಬೆಂಗಳೂರಿನ ಸಣ್ಣ ಗಾರ್ಮೆಂಟ್ಸ್ ಅಂಗಡಿಯೊಂದರಲ್ಲಿ ಬಟ್ಟೆ ಹೊಲಿಯುತ್ತಿದ್ದ ಕೈಗಳು ಇಂದು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದ ದಿಕ್ಕನ್ನೇ ಬದಲಾಯಿಸಿದ್ದು, 70,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ದೈತ್ಯ ಸಾಮ್ರಾಜ್ಯವನ್ನು ಕಟ್ಟಿಬೆಳೆಸಿವೆ. ಹಾಗಾದ್ರೆ ಈ ಸಾಮಾಜ್ಯದ 'ಸಾಮ್ರಾಟ್'(ಒಡೆಯ)ನ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ಇಲ್ಲಿದೆ ನೋಡಿ.

P4.jfif

ಹೌದು ಕಮರ್ಷಿಯಲ್ ಸ್ಟ್ರೀಟ್ನ ಸಣ್ಣ ಟೈಲರ್ ಶಾಪ್ನಿಂದ ಆರಂಭಗೊಂಡು, ಇಂದು ದೇಶದಲ್ಲಿ ಗಗನಚುಂಬಿ ಕಟ್ಟಡಗಳು ಹಾಗೂ ಬೃಹತ್ ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ನಿರ್ಮಿಸಿರುವ ಪ್ರೆಸ್ಟೀಜ್ ಗ್ರೂಪ್ ಬೆಳೆದುಬಂದ ಹಾದಿ ಯಾವುದೇ ಚಲನಚಿತ್ರದ ಕಥೆಗಿಂತ ಕಡಿಮೆ ಇಲ್ಲ. ಈ ಅದ್ಭುತ ಯಶಸ್ಸಿನ ಸಾರಥಿಯೇ ಇರ್ಫಾನ್ ರಜಾಕ್.

P6.jfif

ಇರ್ಫಾನ್ ರಜಾಕ್ ಸ್ಫೂರ್ತಿದಾಯಕ ಪಯಣ

ಸಾಧಾರಣ ಹಿನ್ನೆಲೆಯಿಂದ ಬಂದ ಇರ್ಫಾನ್ ರಜಾಕ್ ಅವರು ಸ್ವಂತ ಪರಿಶ್ರಮ, ದೂರದೃಷ್ಟಿ ಮತ್ತು ಗ್ರಾಹಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡರು. ಈ ಮೂಲಕ ಭಾರತದ ಎರಡನೇ ಅತಿದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯನ್ನು ಕಟ್ಟಿದ ಇರ್ಫಾನ್ ರಜಾಕ್ ಅವರ ಸ್ಫೂರ್ತಿದಾಯಕ ಪಯಣದ ರೋಚಕ ಕಥೆ ಇಲ್ಲಿದೆ .

P7.jfif

ಇಂದು ಬೃಹತ್ ಸಾಮ್ರಾಜ್ಯವಾಗಿ ಬೆಳೆದುನಿಂತಿರುವ ಪ್ರೆಸ್ಟೀಜ್ ಗ್ರೂಪ್ ಬೆಳೆದುಬಂದ ಹಾದಿ ಅತ್ಯಂತ ರೋಚಕವಾದದ್ದು. ಈ ಯಶಸ್ಸಿನ ಹಿಂದಿನ ರೂವಾರಿ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಇರ್ಫಾನ್ ರಜಾಕ್. ಇವರು ಒಂದು ಸಣ್ಣ ವ್ಯಾಪಾರದಿಂದ ಶುರು ಮಾಡಿ ಸುಮಾರು 70,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಬೃಹತ್ ಉದ್ಯಮವನ್ನು ಕಟ್ಟಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

P9.jfif

ಇರ್ಫಾನ್ ರಜಾಕ್ ಕುಟುಂಬದ ಹಿನ್ನೆಲೆ

ಇರ್ಫಾನ್ ರಜಾಕ್ ಅವರ ತಂದೆ ರಜಾಕ್ ಸತ್ತಾರ್ ಅವರು 1956ರಲ್ಲಿ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ನಲ್ಲಿ 'ಪ್ರೆಸ್ಟೀಜ್ ಹೌಸ್ ಫಾರ್ ಮೆನ್' ಎಂಬ ಸಣ್ಣ ಬಟ್ಟೆ ಹಾಗೂ ಟೈಲರಿಂಗ್ ಅಂಗಡಿಯನ್ನು ತೆರೆದಿದ್ದರು. ಗುಣಮಟ್ಟ ಮತ್ತು ನಂಬಿಕೆಗೆ ಹೆಸರಾಗಿದ್ದ ಈ ಅಂಗಡಿಯಲ್ಲಿ ಇರ್ಫಾನ್ ರಜಾಕ್ ಹಾಗೂ ಅವರ ಸಹೋದರರಾದ ರಜ್ವಾನ್ ಮತ್ತು ನೌಮಾನ್ ಬಾಲ್ಯದಿಂದಲೇ ತಂದೆಗೆ ವ್ಯಾಪಾರದಲ್ಲಿ ನೆರವಾಗುತ್ತಿದ್ದರು.

P2.jfif

ರಿಯಲ್ ಎಸ್ಟೇಟ್ ಉದ್ಯಮ ಕಟ್ಟಿದ ಹಾದಿ

ಬೆಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಮುಗಿಸಿದ ಇರ್ಫಾನ್, ಕುಟುಂಬದ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸುವ ಕನಸು ಕಂಡಿದ್ದರು. 1980ರ ದಶಕದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇದ್ದ ಅವಕಾಶಗಳನ್ನು ಹುಡುಕಿಕೊಂಡ ಅವರು 1986ರಲ್ಲಿ 'ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್' ಸಂಸ್ಥೆಯನ್ನು ಅಧಿಕೃತವಾಗಿ ಸ್ಥಾಪಿಸಿ ಗಮನ ಸೆಳೆದರು. ಆರಂಭದಲ್ಲಿ ಕೋರಮಂಗಲ ಸೇರಿದಂತೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸಣ್ಣ ಪ್ರಮಾಣದ ವಸತಿ ಯೋಜನೆಗಳನ್ನು ಆರಂಭಿಸಿದ ಇವರು, ಹಂತ-ಹಂತವಾಗಿ ದೊಡ್ಡ ಮಟ್ಟದ ಉದ್ಯಮಕ್ಕೆ ಕೈಹಾಕುತ್ತಾ ಹೋದರು.

P11.jfif

1990ರ ದಶಕದ ವೇಳೆಗೆ ಬೆಂಗಳೂರು ಐಟಿ ಹಬ್ ಆಗಿ ಬೆಳೆಯುತ್ತಿದ್ದಂತೆ ಪ್ರೆಸ್ಟೀಜ್ ಸಂಸ್ಥೆಯ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಯಿತು. ಪ್ರೆಸ್ಟೀಜ್ ಗ್ರೂಪ್ನ ಬೆಳವಣಿಗೆಗೆ ಮಹತ್ವದ ತಿರುವು ನೀಡಿದ್ದು ಯುಬಿ ಸಿಟಿ ನಿರ್ಮಾಣ. ವಿಜಯ್ ಮಲ್ಯ ಅವರ ಸಹಭಾಗಿತ್ವದಲ್ಲಿ ಬೆಂಗಳೂರಿನ ಮಧ್ಯಭಾಗದಲ್ಲಿ ನಿರ್ಮಿಸಲಾದ ಈ ಐಷಾರಾಮಿ ಮಾಲ್ ಮತ್ತು ವಾಣಿಜ್ಯ ಕೇಂದ್ರವು ಪ್ರೆಸ್ಟೀಜ್ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿತು.ಆಪಲ್, ಯು-ಎಸ್ನ ಕ್ಯಾಟರ್ಪಿಲರ್, ಅರ್ಮಾನಿ, ಲೂಯಿ ವುಟಾನ್ನಂತಹ ಜಾಗತಿಕ ದೈತ್ಯ ಕಂಪನಿಗಳು ಪ್ರೆಸ್ಟೀಜ್ ಗ್ರೂಪ್ನ ವಾಣಿಜ್ಯ ಕಟ್ಟಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.

P8.jfif

ಪ್ರೆಸ್ಟೀಜ್ ಗ್ರೂಪ್ ಉದ್ಯಮ ದೇಶಾದ್ಯಂತ ವಿಸ್ತರಣೆ

ಇಂದು ಪ್ರೆಸ್ಟೀಜ್ ಗ್ರೂಪ್ ಕೇವಲ ವಸತಿ ಕಟ್ಟಡಗಳಿಗೆ ಸೀಮಿತವಾಗಿಲ್ಲ. ಪ್ರೀಮಿಯಂ ಅಪಾರ್ಟ್ಮೆಂಟ್ಗಳು, ಐಟಿ ಪಾರ್ಕ್ಗಳು, ಶಾಪಿಂಗ್ ಮಾಲ್ಗಳು, ಐಷಾರಾಮಿ ಹೋಟೆಲ್ಗಳು ಮತ್ತು ಇಂಟಿಗ್ರೇಟೆಡ್ ಟೌನ್ಶಿಪ್ಗಳು ಕೂಡ ನಿರ್ಮಾಣ ಆಗಿವೆ. ಬೆಂಗಳೂರಿನ ನಂತರ ಚೆನ್ನೈ, ಹೈದರಾಬಾದ್, ಕೊಚ್ಚಿ, ಕೋಝಿಕೋಡ್ ಮತ್ತು ಇತ್ತೀಚೆಗೆ ಮುಂಬೈನಲ್ಲೂ ಕೂಡ ಪ್ರೆಸ್ಟೀಜ್ ತನ್ನ ಹೆಜ್ಜೆಗುರುತನ್ನು ಮೂಡಿಸಿದೆ.

P3.jfif

ಇರ್ಫಾನ್ ರಜಾಕ್ ಅವರ ದೂರದೃಷ್ಟಿ ಹಾಗೂ ಕಠಿಣ ಪರಿಶ್ರಮದಿಂದ ಪ್ರೆಸ್ಟೀಜ್ ಎಸ್ಟೇಟ್ಸ್ ಇಂದು ಬಿಎಸ್ಇ ಮತ್ತು ಎನ್ಎಸ್ಇ ಲಿಸ್ಟೆಡ್ ಕಂಪನಿಯಾಗಿದ್ದು, ಡಿಎಲ್ಎಫ್ ನಂತರ ದೇಶದ ಎರಡನೇ ಅತಿದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯ ಪ್ರಕಾರ ಇರ್ಫಾನ್ ರಜಾಕ್ ಮತ್ತು ಅವರ ಕುಟುಂಬದ ವೈಯಕ್ತಿಕ ಆಸ್ತಿ ಮೌಲ್ಯವು ಬಿಲಿಯನ್ ಡಾಲರ್ಗಳಷ್ಟಿದೆ (ಸುಮಾರು 10,000 ಕೋಟಿ ರೂಪಾಯಿಗೂ ಅಧಿಕ).

P5.jfif

ಇನ್ನೂ ರಿಯಲ್ ಎಸ್ಟೇಟ್ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಗಣನೀಯ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಇವರಿಗೆ 2024ರಲ್ಲಿ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' ನೀಡಿ ಗೌರವಿಸಿದೆ. ಒಟ್ಟಿನಲ್ಲಿ ಹೇಳುವುದಾದರೆ ಕೇವಲ ಟೈಲರಿಂಗ್ ಅಂಗಡಿಯಿಂದ ಆರಂಭಿಸಿ ಗ್ರಾಹಕರ ನಂಬಿಕೆ ಮತ್ತು ಉನ್ನತ ಗುಣಮಟ್ಟದ ಆಧಾರದ ಮೇಲೆ ಭಾರತದ ಅತ್ಯಂತ ಯಶಸ್ವಿ ರಿಯಲ್ ಎಸ್ಟೇಟ್ ಉದ್ಯಮವನ್ನು ಕಟ್ಟಿಬೆಳೆಸಿದ ಇರ್ಫಾನ್ ರಜಾಕ್ ಅವರ ಪಯಣವು ಉದ್ಯಮಿಯಾಗಲು ಬಯಸುವ ಲಕ್ಷಾಂತರ ಯುವಕರಿಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

Comments

Leave a comment

Recommended Reading