ಬಸವನಗುಡಿಯ ಕ್ಷೇತ್ರದ ಶಾಸಕರಾದ ಶ್ರೀಯುತ ರವಿ ಸುಬ್ರಮಣ್ಯ ಅವರು ಒಮ್ಮೆ ಶ್ರೀನಗರ ವಾರ್ಡ್ ರಸ್ತೆಗಳನ್ನು ಗಮನಿಸಲಿ
ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಶಾಸಕರು ಅಂತ ಅಂದ್ರೆ ಬಸವನಗುಡಿ ಕ್ಷೇತ್ರ ಶಾಸಕರಾದ ರವಿ ಸುಬ್ರಮಣ್ಯ ಅಂದ್ರೆ ತಪ್ಪಾಗಲ್ಲ ಯಾಕೆಂದರೆ ಯಾವ ಹಮ್ಮುಬಿಮ್ಮು ಇಲ್ಲದೆ ಯಾವ ಬ್ಯಾನರ್ ಭರಾಟೆಗಳಿಲ್ಲದೆ ಬೆಳೆದು ಬಂದಂತಹ ಬಿಜೆಪಿಯ ಶಾಸಕರು ಮತ್ತು ಈ ಕ್ಷೇತ್ರದ ಭಾಗದಲ್ಲಿ ಸದಾ ಗೆಲುವನ್ನೇ ಕಾಣುತ್ತಿರುವ ಶಾಸಕ.
ನಾವು ಮನವಿ ಮಾಡಿಕೊಳ್ಳುತ್ತಿರುವುದು ಏನಂದರೆ ಈ ಬಸವನಗುಡಿ ಕ್ಷೇತ್ರದ ಶ್ರೀನಗರ ವಾರ್ಡ್ನ ನ ರಸ್ತೆಗಳನ್ನು ಒಮ್ಮೆ ಗಮನಿಸಲಿ ಯಾವ ರಸ್ತೆಗಳಿಗೆ ಹೋದರು ನಿಮಗೆ ಗುಂಡಿಗಳದ್ದೇ ಕಾರು ಬಾರು , ವಯಸ್ಸಾದವರು ಈ ರಸ್ತೆಗಳಲ್ಲಿ ಓಡಾಡಲು ಬಹಳ ಕಷ್ಟ ಆಗ್ತಾ ಇದೆ ಮತ್ತು ಗುತ್ತಿಗೆದಾರರು ಪೈಪ್ ಗಳನ್ನ ಅಳವಡಿಸಲು ತೆಗೆದ ಗುಂಡಿಯನ್ನು ಹಾಗೆ ಬಿಟ್ಟಿದ್ದಾರೆ ಈಗಂತೂ ಮಳೆ ಹನಿ ಬೀಳುತ್ತಿದೆ ಹಿರಿಯ ನಾಗರೀಕರು, ಮಕ್ಕಳು ಶಾಲೆಗೆ ಹೋಗುವ ಸಮಯದಲ್ಲಿ ಓಡಾಡಲು ಬಹಳ ಕಷ್ಟ ಪಡುತ್ತಿದ್ದಾರೆ ಮತ್ತು ಕಾಮಗಾರಿ ಮಾಡ್ತಾ ಇದ್ರು ಯಾವ ಒಂದು ಎಚ್ಚರಿಕೆಯ ಫಲಕಗಳು ಇಲ್ಲ ಇದರಿಂದ ಆಕ್ಸಿಡೆಂಟ್ ಆಗುವಂತಹ ಸಾಧ್ಯತೆ ಬಹಳ ಹೆಚ್ಚಾಗಿದೆ.
ಕೆಲಸ ಮುಗಿಸಿದರೂ ರಸ್ತೆ ಗುಂಡಿಗಳನ್ನ ಇವರು ಮುಚ್ಚಿರುವುದಿಲ್ಲ,ನಾವು ಮತ್ತೊಮ್ಮೆ ಮನವಿ ಮಾಡ್ತಾ ಇದ್ದೀವಿ ಶಾಸಕರು ಒಮ್ಮೆ ಶ್ರೀನಗರ ವಾರ್ಡ್ ನ ರಸ್ತೆಗಳಲ್ಲಿ ಓಡಾಡಬೇಕು ಅವಾಗ ನಿಜವಾದ ಪರಿಸ್ಥಿತಿ ಅರ್ಥ ಆಗುತ್ತೆ ದಯವಿಟ್ಟು ಒಮ್ಮೆ ಗಮನಿಸಿ ಸರ್ ಈ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಜನ ಬಯಸುತ್ತಿದ್ದಾರೆ.
ಬಿಬಿಎಂಪಿ ಸದಸ್ಯರು ಇದ್ದಿದ್ದರೆ ಸರಿಯಾಗುತ್ತಿತ್ತು ಮತ್ತು ಬೆಂಗಳೂರಿನ ಮಹಾನಗರ ಪಾಲಿಕೆ ಸದಸ್ಯರು ಅಧಿಕಾರ ಕಳೆದುಕೊಂಡು ಒಂದು ದಶಕ ಸಮೀಪಿಸುತ್ತಿದೆ. GBA ಚುನಾವಣೆ ಮರೀಚಿಕೆಯಾಗಿದೆ. ಆದ್ದರಿಂದ ಶಾಸಕರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. GBA ನ ಯಾವ ಅಧಿಕಾರಿಗಳು ವಾರ್ಡ್ನತ್ತ ತಿರುಗಿ ನೋಡುತ್ತಿಲ್ಲ.
ಶ್ರೀನಗರದ ಕಾಳಿದಾಸ ಸರ್ಕಲ್ ನಲ್ಲಿ ಬಸ್ ಸ್ಟಾಂಡ್ ನಲ್ಲಿ ನಿಂತಿರುವ ಕಾರುಗಳನ್ನು ಗಮನಿಸಿ... ಸಾರ್ವಜನಿಕರ ಬಸ್ ನಿಲ್ದಾಣ.. ಅಕ್ರಮ ಕಾರ್ ಪಾರ್ಕಿಂಗ್ ಸ್ಥಳ ಆಗಿದೆ... ಬಸ್ ನಿಲ್ಲಲು ಸ್ಥಳವಿಲ್ಲದಂತಾಗಿದೆ.... ದಯವಿಟ್ಟು ಕಾರುಗಳನ್ನು ತೆರವು ಗೊಳಿಸಲು ಕ್ರಮ ತೆಗೆದುಕೊಳ್ಳಿ.