ರಾಷ್ಟ್ರೀಯ ಸುದ್ದಿ

1969ರಿಂದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪಡೆದವರ ಮಾಹಿತಿ;

ಸುದ್ದಿ ಡೆಸ್ಕ್· 5 min read
1969ರಿಂದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪಡೆದವರ ಮಾಹಿತಿ;

ಸಿನಿರಂಗದ ಏಳಿಗೆಗೆ ಶ್ರಮಿಸಿದ ಕಲಾವಿದರಿಗೆ ನೀಡಲಾಗುವ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೇ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ.

1913ರಲ್ಲಿ ಭಾರತದ ಮೊದಲ ಪೂರ್ಣಪ್ರಮಾಣದ ಮೂಕಿ ಚಿತ್ರ 'ರಾಜಾ ಹರಿಶ್ಚಂದ್ರ' ನಿರ್ಮಿಸಿದ್ದ 'ಭಾರತೀಯ ಚಿತ್ರರಂಗದ ಪಿತಾಮಹ' ಧುಂಡಿರಾಜ್ ಗೋವಿಂದ್ ಫಾಲ್ಕೆ ಅವರ ಸ್ಮರಣಾರ್ಥ 1969ರಲ್ಲಿ ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಯಿತು.

D3.jpg

ಪ್ರಶಸ್ತಿಯು 'ಸ್ವರ್ಣ ಕಮಲ' ಪದಕ, ರೇಷ್ಮೆ ಶಾಲು ಹಾಗೂ ₹10 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.

2024ನೇ ಸಾಲಿನ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಗೌರವಕ್ಕೆ ಅನಂತನಾಗ್‌ ಅವರನ್ನು ಆಯ್ಕೆ ಮಾಡಲಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕುರಿತು ಅಧಿಕೃತವಾಗಿ ಘೋಷಿಸಿದೆ.

2023ರಲ್ಲಿ ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ ನಾಲ್ಕು ದಶಕಗಳ ಸುದೀರ್ಘ ವೃತ್ತಿಜೀವನ ಮತ್ತು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿನ ಅದ್ಭುತ ನಟನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಸಿನಿ ಸಿಪ್ 11: ಅನಂತನಾಗ್ ಯಾಕೆ ತಮ್ಮ ಸಿನಿಮಾ ನೋಡಲ್ಲ?ಅನಂತನಾಗ್‌ ಸಂದರ್ಶನ: ಅನಂತ ಅಮೃತಯಾನ

ಸತ್ಯಜಿತ್ ರೇ, ರಾಜ್ ಕಪೂರ್, ಲತಾ ಮಂಗೇಷ್ಕರ್ ಸೇರಿದಂತೆ ಭಾರತೀಯ ಸಿನಿರಂಗದ ಅನೇಕ ಮಹಾನ್ ಚೇತನಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

D2.webp

1969ರಿಂದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪಡೆದವರ ಮಾಹಿತಿ;

1969 | ದೇವಿಕಾ ರಾಣಿ- ಹಿಂದಿ

1970 | ಬೀರೇಂದ್ರನಾಥ್ ಸಿರ್ಕಾರ್- ಬೆಂಗಾಳಿ

1971 | ಪೃಥ್ವಿರಾಜ್ ಕಪೂರ್- ಹಿಂದಿ

1972 | ಪಂಕಜ್ ಮಲ್ಲಿಕ್- ಬೆಂಗಾಳಿ, ಹಿಂದಿ

1973 | ಸುಲೋಚನಾ (ರೂಬಿ ಮೈಯರ್ಸ್)- ಹಿಂದಿ

1974 | ಬಿ.ಎನ್.ರೆಡ್ಡಿ- ತೆಲುಗು

1975 | ಧೀರೇಂದ್ರನಾಥ್ ಗಂಗೂಲಿ-ಬೆಂಗಾಳಿ

1976 | ಕಾನನ್ ದೇವಿ- ಬೆಂಗಾಳಿ

1977 | ನಿತಿನ್ ಬೋಸ್- ಬೆಂಗಾಳಿ, ಹಿಂದಿ

1978 | ರೈಚಂದ್ ಬೋರಾಲ್- ಬೆಂಗಾಳಿ, ಹಿಂದಿ

1979 | ಸೊಹ್ರಾಬ್ ಮೋದಿ- ಹಿಂದಿ

1980 | ಪೈಡಿ ಜೈರಾಜ್- ಹಿಂದಿ

1981 | ನೌಷಾದ್- ಹಿಂದಿ

1982 | ಎಲ್.ವಿ.ಪ್ರಸಾದ್- ತೆಲುಗು, ತಮಿಳು, ಹಿಂದಿ

1983 | ದುರ್ಗಾ ಖೋಟೆ- ಹಿಂದಿ, ಮರಾಠಿ

1984 | ಸತ್ಯಜಿತ್ ರೇ- ಬೆಂಗಾಳಿ

1985 | ವಿ.ಶಾಂತಾರಾಮ್- ಹಿಂದಿ, ಮರಾಠಿ

1986 | ಬಿ.ನಾಗಿ ರೆಡ್ಡಿ- ತೆಲುಗು

1987 | ರಾಜ್ ಕಪೂರ್- ಹಿಂದಿ

1988 | ಅಶೋಕ್ ಕುಮಾರ್- ಹಿಂದಿ

1989 | ಲತಾ ಮಂಗೇಶ್ಕರ್- ಹಿಂದಿ, ಮರಾಠಿ

1990 | ಅಕ್ಕಿನೇನಿ ನಾಗೇಶ್ವರ ರಾವ್- ತೆಲುಗು

1991 | ಭಾಲ್ಜಿ ಪೆಂಧಾರ್ಕರ್- ಮರಾಠಿ

1992 | ಭೂಪೇನ್ ಹಜಾರಿಕಾ- ಅಸ್ಸಾಮಿ

1993 | ಮಜ್ರೂಹ್ ಸುಲ್ತಾನ್ಪುರಿ- ಹಿಂದಿ

1994 | ದಿಲೀಪ್ ಕುಮಾರ್- ಹಿಂದಿ

1995 | ಡಾ.ರಾಜ್‌ಕುಮಾರ್- ಕನ್ನಡ

1996 | ಶಿವಾಜಿ ಗಣೇಶನ್- ತಮಿಳು

1997 | ಕವಿ ಪ್ರದೀಪ್- ಹಿಂದಿ

1998 | ಬಿ.ಆರ್.ಚೋಪ್ರಾ- ಹಿಂದಿ

1999 | ಹೃಷಿಕೇಶ್ ಮುಖರ್ಜಿ- ಹಿಂದಿ

2000 | ಆಶಾ ಭೋಂಸ್ಲೆ- ಹಿಂದಿ, ಮರಾಠಿ

2001 | ಯಶ್ ಚೋಪ್ರಾ- ಹಿಂದಿ

2002 | ದೇವ್ ಆನಂದ್- ಹಿಂದಿ

2003 | ಮೃಣಾಲ್ ಸೇನ್- ಬೆಂಗಾಳಿ, ಹಿಂದಿ

2004 | ಅಡೂರ್ ಗೋಪಾಲಕೃಷ್ಣನ್

2005 | ಶ್ಯಾಮ್ ಬೆನೆಗಲ್- ಮಲಯಾಳಂ

2006 | ತಪನ್ ಸಿನ್ಹಾ- ಬೆಂಗಾಳಿ, ಹಿಂದಿ

2007 | ಮನ್ನಾ ಡೇ- ಬೆಂಗಾಳಿ, ಹಿಂದಿ

2008 | ವಿ.ಕೆ.ಮೂರ್ತಿ- ಹಿಂದಿ

2009 | ಡಿ.ರಾಮಾನಾಯ್ಡು- ತೆಲುಗು

2010 | ಕೆ.ಬಾಲಚಂದರ್- ತಮಿಳು

2011 | ಸೌಮಿತ್ರ ಚಟರ್ಜಿ- ಬೆಂಗಾಳಿ

2012 | ಪ್ರಾಣ್- ಹಿಂದಿ

2013 | ಗುಲ್ಜಾರ್- ಹಿಂದಿ

2014 | ಶಶಿ ಕಪೂರ್- ಹಿಂದಿ

2015 | ಮನೋಜ್ ಕುಮಾರ್-ಹಿಂದಿ

2016 | ಕೆ.ವಿಶ್ವನಾಥ್- ತೆಲುಗು

2017 | ವಿನೋದ್ ಖನ್ನಾ- ಹಿಂದಿ

2018 | ಅಮಿತಾಭ್ ಬಚ್ಚನ್- ಹಿಂದಿ

2019 | ರಜನಿಕಾಂತ್- ತಮಿಳು

2020 | ಆಶಾ ಪಾರೇಖ್- ಹಿಂದಿ

2021 | ವಹೀದಾ ರೆಹಮಾನ್- ಹಿಂದಿ

2022 | ಮಿಥುನ್ ಚಕ್ರವರ್ತಿ-ಬೆಂಗಾಳಿ, ಹಿಂದಿ

2023 | ಮೋಹನ್‌ಲಾಲ್- ಮಲಯಾಳಂ

2024 | ಅನಂತ್‌ ನಾಗ್‌- ಕನ್ನಡ

Comments

Leave a comment

Recommended Reading