ರಾಷ್ಟ್ರೀಯ ಸುದ್ದಿ

​ಮದುವೆ ಒತ್ತಡದಿಂದ ರೋಸಿಹೋದ ಯುವತಿ

ಸುದ್ದಿ ಡೆಸ್ಕ್· 5 min read
​ಮದುವೆ ಒತ್ತಡದಿಂದ ರೋಸಿಹೋದ ಯುವತಿ

ಮನೆಯಲ್ಲಿ ಪ್ರತಿದಿನ "ಮದುವೆ ಮಾಡಿಕೊಡ್ತೀವಿ, ಬೇಗ ಮದುವೆ ಮಾಡ್ಕೋ" ಅಂತ ಪೋಷಕರು ಸಾಕಪ್ಪಾ ಸಾಕು ಎನ್ನುವಷ್ಟು ಕಿರಿಕಿರಿ ಮಾಡುತ್ತಿದ್ದಾರಾ? ಮದುವೆ ಮಾಡಿಕೊಳ್ಳಲು ಕಿಂಚಿತ್ತೂ ಇಷ್ಟವಿಲ್ಲದ ಯುವತಿಯೊಬ್ಬಳು ಅಂತಹದ್ದೊಂದು ಜಂಜಾಟದಿಂದ ತಾತ್ಕಾಲಿಕವಾಗಿ ಪಾರಾಗಲು ಒಂದು ಸೂಪರ್ ಐಡಿಯಾ ಮಾಡಿದ್ದಾಳೆ. ಸದ್ಯ ಈ ಯುವತಿಯ ಐಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಈಕೆಯ ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ!

​ಮದುವೆ ಒತ್ತಡದಿಂದ ರೋಸಿಹೋದ ಯುವತಿ

​ಮನೆಯಲ್ಲಿ ಎಲ್ಲರಿಗೂ ಮಗಳ ವಯಸ್ಸು ಈಗ 20 ವರ್ಷ. "ಮಗಳು ದೊಡ್ಡವಳಾಗುತ್ತಿದ್ದಾಳೆ, ಬೇಗ ಕಣ್ಣುತುಂಬಾ ಮದುವೆ ಮಾಡಬೇಕು" ಎಂದು ಹೆತ್ತವರು ನಿತ್ಯವೂ ತಲೆ ತಿನ್ನುತ್ತಿದ್ದರು. ಆದರೆ ಆ ಯುವತಿಗೆ ಸದ್ಯಕ್ಕೆ ಮದುವೆ ಮಾಡಿಕೊಳ್ಳುವ ಯಾವುದೇ ಮೂಡ್ ಇರಲಿಲ್ಲ. ಮನೆಯವರ ನಿರಂತರ ಒತ್ತಡದಿಂದ ರೋಸಿಹೋದ ಆಕೆಗೆ, ಇದರಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂಬ ಆಲೋಚನೆ ಬಂದಿದೆ.

​ಮುಂಡನ ಮಾಡಿಸಿಕೊಂಡು ಪ್ಲ್ಯಾನ್ ಸಕ್ಸಸ್!

​ಮನೆಯವರ ಮಾತಿಗೆ ಬೇಸತ್ತು ಆಕೆ ಎರಡು ದಿನಗಳ ಬಳಿಕ ದಿಢೀರ್ ಎಂದು ತನ್ನ ತಲೆಯ ಇಡೀ ಕೂದಲಿಗೆ ಕತ್ತರಿ ಹಾಕಿ ಸಂಪೂರ್ಣವಾಗಿ ಮುಂಡನ (ಗುಂಡು) ಮಾಡಿಸಿಕೊಂಡು ಬಿಟ್ಟಿದ್ದಾಳೆ!

​ಈಗ ತಲೆಗೆ ಸಂಪೂರ್ಣವಾಗಿ ಗುಂಡು ಹಾಕಿಸಿಕೊಂಡಿರುವುದರಿಂದ, ಮತ್ತೆ ಚೆಂದದ ದಟ್ಟವಾದ ಕೂದಲು ಬೆಳೆಯಲು ಕನಿಷ್ಠ 1 ರಿಂದ 2 ವರ್ಷಗಳೇ ಬೇಕಾಗುತ್ತದೆ. "ಈಗ ಸದ್ಯಕ್ಕೆ ಮದುವೆ ಮಾತು ಬಂದರೂ ತಲೆಗೆ ಕೂದಲೇ ಇಲ್ಲ, ಇನ್ನು ಮದುವೆ ಹೇಗೆ ಆಗೋದು?" ಎಂದು ಸಮಾಧಾನ ಪಟ್ಟುಕೊಂಡ ಆ ಯುವತಿ, "ಮುಂದೆ ಕನಿಷ್ಠ ಒಂದೆರಡು ವರ್ಷಗಳ ಕಾಲ ನನಗೆ ಮದುವೆ ಟೆನ್ಷನ್ ಇರುವುದಿಲ್ಲ, ಈಗ ನಾನು ಫುಲ್ ಹ್ಯಾಪಿ" ಎಂದು ಖುಷಿಯಿಂದ ಕಾಲ ಕಳೆಯುತ್ತಿದ್ದಾಳೆ.

​ಮದುವೆಯಿಂದ ತಪ್ಪಿಸಿಕೊಳ್ಳಲು ಈಕೆ ಮಾಡಿದ ಈ ಅತಿ ಬುದ್ಧಿವಂತಿಕೆಯ ಉಪಾಯ ನೋಡಿ ಈಗ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ!

Comments

Leave a comment

Recommended Reading